ವಿದ್ಯಾರ್ಥಿ ಸಾಮಾಜಿಕ ಹೋರಾಟಗಾರ ಯಲ್ಲಾಲಿಂಗನ ಕೊಲೆ ಕೇಸನ್ನು CBIಗ

Signatures:
  20 (Goal: 5,000)

Petitioning: ಮುಖ್ಯಮಂತ್ರಿಗಳೇ, ವಿದ್ಯಾರ್ಥಿ ಸಾಮಾಜಿಕ ಹೋರಾಟಗಾರ ಯಲ್ಲಾಲಿಂಗà

Petitioner: SAMRPANA started on June 14, 2015

ವಿದ್ಯಾರ್ಥಿ ಸಾಮಾಜಿಕ ಹೋರಾಟಗಾರ ಯಲ್ಲಾಲಿಂಗನ ಕೊಲೆ ಕೇಸನ್ನು CBIಗ

ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ಕನಕಗಿರಿ ಮತಕ್ಷೇತ್ರದ ಹುಲಿಹೈದರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಕಾಪುರ ಗ್ರಾಮದ ಸಾಮಾಜಿಕ ಕಳಕಳಿಯ ವಿದ್ಯಾರ್ಥಿ ಯಲ್ಲಾಲಿಂಗನು ತನ್ನ ಗ್ರಾಮದ ಮೂಲಭೂತ ಸೌಕರ್ಯದ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ಟಿವಿ ಚಾನೆಲ್ ಒಂದಕ್ಕೆ ನೀಡಿದ ಅಸಮಾಧಾನದ ಹೇಳಿಕೆ. ಯಲ್ಲಾಲಿಂಗನ ಪ್ರಾಣವನ್ನೇ ತೆಗೆಯಿತು.
ಸ್ಥಳೀಯ ರಾಜಕೀಯ ಪುಢಾರಿ ಹನುಮೇಶ್ ನಾಯಕ ಮತ್ತು ಆತನ ಮಗ ಸೇರಿದಂತೆ ಒಂದು ಗುಂಪು, ಯಲ್ಲಾಲಿಂಗನನ್ನು ಹಿಂಬಾಲಿಸಿ,
"ನನ್ನ ಕೊಲ್ಲ ಬ್ಯಾಡ್ರೋ ಯಪ್ಪಾ" ಅಂತ ಅಂಗಲಾಚಿದ್ರು ಕರುಣೆಯಿಲ್ಲದೇ ಅಮಾನುಷವಾಗಿ ಕೊಂದು, ಶವವನ್ನು ರೈಲ್ವೆ ಹಳಿಯ ಮೇಲೆ ಹಾಕಿದ್ದಾರೆ.
ತೀರ ಬಡತನದ ಕುಟುಂಬ ಘಟನೆ ನಡೆದು ಕೆಲವು ತಿಂಗಳುಗಳ ನಂತರ ಯಲ್ಲಾಲಿಂಗನ ತಾಯಿ ಅನುಮಾನದಿಂದ ಪೊಲೀಸರಿಗೆ ದೂರು ನೀಡುತ್ತಾರೆ. ಕೊಲೆ ಪ್ರಕರಣದ ತನಿಖೆಯನ್ನು ಸ್ಥಳೀಯ ಎಸ್.ಪಿ. ಕೊಲೆಗಡುಕರನ್ನು ಬಂಧಿಸುತ್ತಾರೆ. ಮುಖ್ಯ ಆರೋಪಿ ಹನುಮೇಶ್ ನಾಯಕನನ್ನು ಬಂಧಿಸಿಲ್ಲ.
ನಿಗೂಢ ಕೊಲೆಯ ಬಗ್ಗೆ ಸರ್ಕಾರ "CBI" ತನಿಖೆಗೆ ವಹಿಸಬೇಕು. ತಪ್ಪಿತಸ್ಥರು ಯಾರೇ ಆದ್ರೂ ಶಿಕ್ಷೆ ಯಾಗಲೇ ಬೇಕು.
ಬಡವ, ಪ್ರಾಮಾಣಿಕ, ಸಾಮಾಜಿಕ ಕಾರ್ಯಕರ್ತ, ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆಗೆ ನ್ಯಾಯ ಒದಗಿಸಿ.

-ಸಮರ್ಪಣ